ಬೆಳಗಾವಿಯಲ್ಲಿ ಗಡಿ ಮತ್ತು ಭಾಷಾ ವಿವಾದ : ಮಹಾರಾಷ್ಟ್ರ-ಕರ್ನಾಟಕ ಬಸ್ ಸೇವೆಗಳು ಸ್ಥಗಿತಗೊಂಡಿವೆ.
ಬೆಳಗಾವಿಯಲ್ಲಿ ಕನ್ನಡ-ಮರಾಠಿ ಭಾಷಾ ವಿವಾದದಿಂದ ತೀವ್ರತೆ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ಕರ್ನಾಟಕ-ಮಹಾರಾಷ್ಟ್ರ ನಡುವಿನ ಬಸ್ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಬೆಳಗಾವಿ ಗಡಿ ಜಿಲ್ಲೆಯಲ್ಲಿ ಕನ್ನಡ-ಮರಾಠಿ ಭಾಷಾ ವಿವಾದದಿಂದ ಉದ್ಭವಿಸಿದ ಹೆಚ್ಚಿದ ಅಶಾಂತಿಯ ಹಿನ್ನೆಲೆಯಲ್ಲಿ, ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವಿನ ಬಸ್ ಸೇವೆಗಳು ಸ್ಥಗಿತಗೊಂಡಿವೆ ಎಂದು ಮಂಗಳವಾರ ಪಿಟಿಐ ಸುದ್ದಿ ಸಂಸ್ಥೆ ಅಧಿಕಾರಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಬೆಳಗಾವಿಯಲ್ಲಿ KS RTC ಬಸ್ ಕಂಡಕ್ಟರ್ ಮತ್ತು ಚಾಲಕರ ಮೇಲೆ ಮರಾಠಿಯಲ್ಲಿ ಮಾತನಾಡದ ಕಾರಣಕ್ಕೆ ನಡೆ ದಾಳಿಯ ನಂತರ. ಅಪ್ರಾಪ್ತ ಬಾಲಕಿ ಕೂಡ ಕಂಡಕ್ಟರ್ ತನ್ನೊಂದಿಗೆ ಅವಾಚ್ಯವಾಗಿ ವರ್ತಿಸಿದ್ದಾನೆ ಎಂದು ದೂರು ನೀಡಿದ ಪರಿಣಾಮ ಘಟನೆ ಮತ್ತಷ್ಟು ಸಂಕೀರ್ಣಗೊಂಡಿದೆ.
ಈ ವಿಷಯವು ಮತ್ತಷ್ಟು ದೊಡ್ಡ ವಿವಾದವಾಗಿ ಮಾರ್ಪಟ್ಟಿದ್ದು, ಎರಡೂ ರಾಜ್ಯಗಳ ಬಸ್ ಸಿಬ್ಬಂದಿಗಳ ನಡುವೆ ಪರಸ್ಪರ ಹಲ್ಲೆ ಮತ್ತು ಸಂಘರ್ಷಗಳು ತೀವ್ರಗೊಂಡಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರವಾಗಿಸಿದೆ. ಗಡಿಭಾಗಗಳಲ್ಲಿ ಭಾಷಾ ಸಂಬಂಧಿತ ಸಂಘರ್ಷಗಳು ನಡೆಯುತ್ತಿದ್ದು, ಕನ್ನಡ ಮತ್ತು ಮರಾಠಿ ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳು ಮತ್ತಷ್ಟು ಭುಗಿಲೆದ್ದಿವೆ.
ನೆನ್ನೆಯಿಂದ ಮಹಾರಾಷ್ಟ್ರಕ್ಕೆ ನಮ್ಮ ಬಸ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ಅದೇ ರೀತಿ, ಮಹಾರಾಷ್ಟ್ ರಾಜ್ಯ ರಸ್ತೆ ಸಾರಿಗೆ ನಿಗಮ ( MSRTC) ಕೂಡ ಕರ್ನಾಟಕಕ್ಕೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ ." ಎಂದು ಉತ್ತರ ಪಶ್ಚಿಮ ಕರ್ನಾಟಕ ರಸ್ತೆ ಸಾರಿಗೆ ನಿಗಮ ( NWKRTC) ನ ಹಿರಿಯ ಅಧಿಕಾರಿ ಪಿಟಿಐಗೆ ಮಾಹಿತಿ ನೀಡಿದ್ದಾರೆ.
"ಬೆಳಗಾವಿ ಚಲೋ" ಕರೆಗೆ ಘೋಷಣೆ
ಇದೀಗ, ನಾರಾಯಣ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ( KRV) ಮಂಗಳವಾರ 'ಬೆಳಗಾವಿ ಚಲೋ' ಕರೆ ನೀಡಿದ್ದು, ಪ್ರತಿಭಟನೆ ನಡೆಸುವ ಹಾಗೂ ಸಾರ್ವಜನಿಕ ಸಭೆ ಆಯೋಜಿಸುವ ಉದ್ದೇಶ ಹೊಂದಿದೆ. ತೀವ್ರಗೊಂಡಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕರ್ನಾಟಕದ ಸಚಿವರು ಶಾಂತಿ ಮತ್ತು ಸಾಮರಸ್ಯಕ್ಕೆ ಕರೆ ನೀಡಿದ್ದಾರೆ. ಆದರೆ, ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, KSRTC ಬಸ್‌ಗಳ ಮೇಲೆ ದಾಳಿ ನಡೆಸಿ ದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಮಹಾರಾಷ್ಟ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ರೆಡ್ಡಿ ಬೆಳಗಾವಿಯಲ್ಲಿ ಮರಾಠಿಯಲ್ಲಿ ಮಾತನಾಡದ ಕಾರಣ ಹಲ್ಲೆಗೊಳಗಾದ ಬಸ್ ಕಂಡಕ್ಟರ್ ಮಹಾದೇವಪ್ಪ ಹುಕ್ಕೇರಿಯನ್ನು ಭೇಟಿ ಮಾಡಿ ಅವರಿಂದ ಘಟನೆ ಕುರಿತು ಮಾಹಿತಿಯನ್ನು ಪಡೆದಿದ್ದಾರೆ.ಸೋಮವಾರ, ಗಡಿವಿವಾದ ಮತ್ತೆ ಮುಂದುವರೆದಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಗೃಹ ಸಚಿವ ಜಿ. ಪರಮೇಶ್ವರ ಶಾಂತಿ ಹಾಗೂ ಸಹನೆಯೊಂದಿಗೆ ನಡೆದುಕೊಳ್ಳಲು ಸಾರ್ವಜನಿಕರಿಗೆ ಕರೆ ನೀಡಿದರು.
ಮಹಾರಾಷ್ಟ್ರ ಸರ್ಕಾರವು ದಾಳಿ ನಡೆಸಿದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು."ಬೆಳಗಾವಿಯಲ್ಲಿ ಭಾಷಾ ತಕರಾರುಗಳು ನಿಯಮಿತವಾಗಿ ತಲೆದೋರುತ್ತಿವೆ. ಇದನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು. ಇದು ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳ ಜವಾಬ್ದಾರಿಯಾಗಿದೆ, ಏಕೆಂದರೆ ಈ ವಿಚಾರ ಮತ್ತಷ್ಟು ಗಂಭೀ ರೂಪ ಪಡೆಯಬಾರದು" ಎಂದು ಅವರು ಅಭಿಪ್ರಾಯಪಟ್ಟರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ , ಬೆಳಗಾವಿಯಲ್ಲಿ ಕನ್ನಡಿಗರ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅವರ ಪ್ರಕಾರ, ಸಿದ್ದರಾಮಯ್ಯ ಸರ್ಕಾರದ ಆಡಳಿತದಲ್ಲಿ ಈ ಪ್ರದೇಶ ಅರಾಜಕತೆಯ ಮುನ್ಸೂಚನೆ ನೀಡುತ್ತಿದೆ."2006-07ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ, ಮಹಾರಾಷ್ಟ್ರ ಬೆಳಗಾವಿಯನ್ನು ವಿಲೀನಗೊಳಿಸುವ ಪ್ರಯತ್ನ ನಡೆಸಿದಾಗ, ನಾನು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಈ ಪ್ರಯತ್ನಗಳನ್ನು ತಡೆಹಿಡಿಯಲು ನಾನು ಕ್ರಮ ಕೈಗೊಂಡಿದ್ದೆ.
ನಾನೇ ಬೆಳಗಾವಿಯನ್ನು ರಾಜ್ಯದ ದ್ವಿತೀಯ ರಾಜಧಾನಿಯಾಗಿ ಘೋಷಿಸಿ, ಸುವರ್ಣ ವಿಧಾನ ಸೌಧದ ಶಂಕುಸ್ಥಾಪನೆ ಮಾಡಿದ್ದೆ. ಆದರೆ ಪ್ರಸ್ತುತ ಸರ್ಕಾರದ ನಿರ್ವಹಣೆಯಲ್ಲಿ ಈ ಪ್ರದೇಶದಲ್ಲಿ ಹಿಂಸಾಚಾರ ಮತ್ತು ಅಶಾಂತಿ ಹೆಚ್ಚಾಗಿದೆ" ಎಂದು ಅವರು ತಮ್ಮ ಪ್ರಕಟಣೆಯಲ್ಲಿ ಹೇಳಿದರು.
ಇದೇ ವೇಳೆ, ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳು ತಕ್ಷಣವೇ ಪರಿಸ್ಥಿತಿಯನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
0 Comments